ಹಬ್ಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಬ್ಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 15, 2011

ಸುಗ್ಗಿಯ ಹುಗ್ಗಿ

ಅಕ್ಕಿ-ಬೇಳೆ ಕಾಯಿ-ಹಾಲು
ಬೆಲ್ಲ-ನೀರು ಕುದಿಸಿ-ಬೆರೆಸಿ
ದ್ರಾಕ್ಷಿ ಜೊತೆಗೆ ಗೋಡ೦ಬಿ-ಬಾದಾಮಿ
ಎಲ್ಲ ಹುರಿದು ಬೆರೆಸಿ ನೋಡು
ಹಿಗ್ಗಿ ತಿನುವ ಹುಗ್ಗಿ ನೋಡು  
 

ಭಾನುವಾರ, ಜನವರಿ 3, 2010

ಇದ್ಯಾವುದೂ ಅಲ್ಲ

ನಡುರಾತ್ರಿಯಲ್ಲ, ಪಟಾಕಿ ಹಚ್ಚುವುದೂ ಅಲ್ಲ
ಗೆಳೆಯರೊಡಗೂಡಿ ತಿಂದು ಕುಡಿಯುವುದಲ್ಲ
ಮನೆಯಲ್ಲಿ ಮಾಡಿದ ಸಿಹಿಯೂಟವೂ ಅಲ್ಲ

ಗುರಿಯೊಂದನು ಹುಡುಕಿ ಪಟ್ಟಿಗೆ ಸೇರಿಸುವುದಲ್ಲ
ಸಿಕ್ಕವರಿಗೆಲ್ಲ ಶುಭಾಶಯವ ಹೇಳುವುದಲ್ಲ
ತಾಣಗಳಿಗೆ ಹೋಗುವುದಲ್ಲ, ವಿಶ್ರಮಿಸುವುದಲ್ಲ

ಹೊಸವರುಷವೆಂದರೆ ಇದಾವುದೂ ಅಲ್ಲ
ಇದು ಬರಿಯ ರಜಾ ದಿನವಲ್ಲ