ಅಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜೂನ್ 20, 2011

ನಾನೇ?

ರಸ್ತೆ ದಾಟುವಾಗ ಕೈ ಹಿಡಿದು 
ಜೋಕೆ ಎ೦ದವಳು ಅಮ್ಮ
ಹೆದರಬೇಡ ನೀ ನಡೆ 
ಮು೦ದೆ  ಎ೦ದದ್ದು ಅಪ್ಪ

ಭಾನುವಾರ, ಫೆಬ್ರವರಿ 8, 2009

ಸ್ಫೂರ್ತಿ

ಯಾರು ದಿನವು ತರುವಳೋ ಎನ್ನ ಮನಕೆ ಹರುಷವ
ಯಾರು ದಿಟದಿ ಕೇಳ್ವಳೋ ಎನ್ನ ಮನದಾಕಾಂಕ್ಷೆಯಾ
ಯಾರು ಮೆಚ್ಚಿ ನಲಿವಳೋ ಎನ್ನ ಆಯ್ಕೆ ಬಯಕೆಯ
ಅವಳೇ ನನ್ನ ಜನನಿಯು ಜಗಕೆ ನನ್ನ ಕೊಟ್ಟಳು
ನನ್ನ ಸ್ಫೂರ್ತಿ ಚಿಲುಮೆಯು

ಮಂಗಳವಾರ, ನವೆಂಬರ್ 18, 2008

ನನ್ನ ತಾಯಿ

ಹೊತ್ತವಳು ಹೆತ್ತವಳು ಬೆಳೆಸಿದವಳವಳು
ಕೈಯ ಹಿಡಿದು ವಿದ್ಯೆಯ ಕಲಿಸಿದವಳವಳು
ಕಥೆ ಹೇಳಿ ನೀತಿಯನು ತಿಳಿಸಿದವಳವಳು
ಸರಿ ದಾರಿಯ ತೋರಿ ನೆಡೆಸಿದವಳವಳು
ಮನುಜರೆಲ್ಲರೆ ಕೇಳಿ ನನ್ನ ತಾಯಿಯವಳು