ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 8, 2009

ಸ್ಫೂರ್ತಿ

ಯಾರು ದಿನವು ತರುವಳೋ ಎನ್ನ ಮನಕೆ ಹರುಷವ
ಯಾರು ದಿಟದಿ ಕೇಳ್ವಳೋ ಎನ್ನ ಮನದಾಕಾಂಕ್ಷೆಯಾ
ಯಾರು ಮೆಚ್ಚಿ ನಲಿವಳೋ ಎನ್ನ ಆಯ್ಕೆ ಬಯಕೆಯ
ಅವಳೇ ನನ್ನ ಜನನಿಯು ಜಗಕೆ ನನ್ನ ಕೊಟ್ಟಳು
ನನ್ನ ಸ್ಫೂರ್ತಿ ಚಿಲುಮೆಯು

ಭಾನುವಾರ, ಜನವರಿ 4, 2009

ಪ್ರೀತಿ ಹಳೆಯದಾ?

ನಿನ್ನೆ ಮಾಡಿದಾ ಅಡುಗೆ
ಇಂದು ಹಳೆಯದು
ನಿನ್ನೆ ನಡೆದಾ ದಾರಿ
ಇಂದು ಹಳೆಯದು
ನಿನ್ನೆ ಓದಿದಾ ಕವನ
ಇಂದು ಹಳೆಯದು
ನಿನ್ನೆ ಮಾಡಿದಾ ಪ್ರೀತಿ
ಇಂದು ಹಳೆಯದಾ?

ಮಂಗಳವಾರ, ನವೆಂಬರ್ 25, 2008

ಅಪ್ಪ

ಅಪ್ಪ ಅಪ್ಪ ನನ್ನ ಮುದ್ದು ಅಪ್ಪ
ನನ್ನ ಜೊತೆ ಆಟ ಆಡು ಬಾರೋ ಅಪ್ಪ
ಗೆಳೆಯರೆಲ್ಲ ನನ್ನ ಬಿಟ್ಟು ಹೋಗ್ತಾರಪ್ಪ
ನೀನೆ ಬಂದು ಒಂದು ಮಾತು ಹೇಳೋ ಅಪ್ಪ
ನಿನಗೆ ತಿಳಿದ ಆಟವೆಲ್ಲ ಕಲಿಸೋ ಅಪ್ಪ
ಗೆಳೆಯರೊಡನೆ ಆಡಿ ಗೆದ್ದು ಬರುವೇನಪ್ಪ
ಆಟ ಮುಗಿಸಿ ಬೇಗ ಬಂದು ಓದುವೆನಪ್ಪ
ಓದಿ ಬರೆದು ನಿನ್ನಂತೆಯೇ ಆಗುವೆನಪ್ಪ
ಪಾಠ ಮಾಡಿ ಮೇಷ್ಟರಾಗಿ ನಲಿಯುವೆನಪ್ಪ
ಅಪ್ಪ ಅಪ್ಪ ನನ್ನ ಮುದ್ದು ಅಪ್ಪ
ನನ್ನ ಜೊತೆ ಆಟ ಆಡು ಬಾರೋ ಅಪ್ಪ

ಮಂಗಳವಾರ, ನವೆಂಬರ್ 18, 2008

ನನ್ನ ತಾಯಿ

ಹೊತ್ತವಳು ಹೆತ್ತವಳು ಬೆಳೆಸಿದವಳವಳು
ಕೈಯ ಹಿಡಿದು ವಿದ್ಯೆಯ ಕಲಿಸಿದವಳವಳು
ಕಥೆ ಹೇಳಿ ನೀತಿಯನು ತಿಳಿಸಿದವಳವಳು
ಸರಿ ದಾರಿಯ ತೋರಿ ನೆಡೆಸಿದವಳವಳು
ಮನುಜರೆಲ್ಲರೆ ಕೇಳಿ ನನ್ನ ತಾಯಿಯವಳು

ಸೋಮವಾರ, ನವೆಂಬರ್ 17, 2008

ನೆನಪು

ನಿನ್ನೊಡನೆ ಮಾತಾಡದ ಆ ಬರಡು ದಿನಗಳಲಿ
ನಿನ್ನ ಮೊಗತೊರದ ಆ ಬರಡು ಚಿತ್ರಗಳಲಿ
ನಿನ್ನ ದನಿತಾರದ ಆ ಬಿರುಗಾಳಿಯಲಿ
ಪ್ರೀತಿಯ ಚಿಗುರಿಗೆ ನೀರಾಗಿರುವುದೇ ನಿನ್ನ ನೆನಪು