ಸೋಮವಾರ, ಜೂನ್ 20, 2011

ನಾನೇ?

ರಸ್ತೆ ದಾಟುವಾಗ ಕೈ ಹಿಡಿದು 
ಜೋಕೆ ಎ೦ದವಳು ಅಮ್ಮ
ಹೆದರಬೇಡ ನೀ ನಡೆ 
ಮು೦ದೆ  ಎ೦ದದ್ದು ಅಪ್ಪ

ಸೋಮವಾರ, ಮಾರ್ಚ್ 28, 2011

ಬುಧವಾರ, ಫೆಬ್ರವರಿ 2, 2011

ಕಿಚ್ಚು

ನಡುರಾತ್ರಿಯ ಹಿಮದಲ್ಲಿ
ಮೈ ನಡುಗುವ ಚಳಿಯಲ್ಲಿ
ಕೊರೆಯುವ ತ೦ಗಾಳಿಯಲಿ
ಕಿಚ್ಚೆಬ್ಬಿಸಲು ನಿನ್ನ ನೆನಪೊಂದೇ ಸಾಕು

ಭಾನುವಾರ, ಜನವರಿ 16, 2011

ಗೀಚಾಟ

ಈಚೆಗೆ ಕೆಲವು ತಿಂಗಳುಗಳಿಂದ ಗೀಚಿದ ಸಾಲುಗಳಿವು. ಹಾಗೆಯೇ ಪುಸ್ತಕದ ಹಾಳೆಗಳಲ್ಲಿ ಕಳೆದುಹೋಗಿದ್ದವು.  ಇ೦ದು ಮನಸ್ಸು ಮಾಡಿದ್ದೇನೆ.

೧.
ಸಾಧಿಸುವೆನೆಂದು ಹತ್ತಿಪ್ಪತ್ತು ಸಾಧನೆಗಳ
ನೀಲಿನಕ್ಷೆಯ ಬರೆಯುವಷ್ಟರಲ್ಲಿ
ಬಳಲಿ ನಿದ್ರೆ ಹೋದ

೨.
ಅಳುವ ಮುದ್ದು ಹುಡುಗಿಯ ಕಣ್ಣಂಚಿನ
ನೀರ ಹನಿಯಲಿ ತನ್ನ ಪ್ರತಿಬಿಂಬವ ಕಂಡು
ಹುಡುಗ ತಾನೂ ಅತ್ತ

 ೩.
ಸಾಗರಕೆ ನಾನೆ೦ದರೆ ಬಲು ಪ್ರೀತಿ
ಹತ್ತಿರ ಹೋದೊಡನೆ ಅಲೆಯ ಬೀಸಿ
ಬರಸೆಳೆದು ಅಪ್ಪಿಕೊಂಡಾಡುವನು

೪.
ಕೊರೆಯುವ ಚಳಿಯಲ್ಲೂ ಮೈ ಬಿಸಿಯಾಗಿತ್ತು,
ಗಡಗಡನೆ ನಡುಗುತಿತ್ತು,
ಇದು ಹುಡುಗಿಯ ಮುಗುಳ್ನಗೆಯಿ೦ದಾದುದಲ್ಲ
ಮೈಗೆ  ತಡೆಯಲಾಗದ ಜ್ವರ ಬ೦ದಿತ್ತು

೫.
ನಿವೇದನೆ ಮಾಡಲು ನೀ ವೇದನೆ ಪಡಬೇಡ
ವಿಧೇಯತೆ ಹೇಡಿತನವಲ್ಲ

ಶನಿವಾರ, ಜನವರಿ 15, 2011

ಸುಗ್ಗಿಯ ಹುಗ್ಗಿ

ಅಕ್ಕಿ-ಬೇಳೆ ಕಾಯಿ-ಹಾಲು
ಬೆಲ್ಲ-ನೀರು ಕುದಿಸಿ-ಬೆರೆಸಿ
ದ್ರಾಕ್ಷಿ ಜೊತೆಗೆ ಗೋಡ೦ಬಿ-ಬಾದಾಮಿ
ಎಲ್ಲ ಹುರಿದು ಬೆರೆಸಿ ನೋಡು
ಹಿಗ್ಗಿ ತಿನುವ ಹುಗ್ಗಿ ನೋಡು