ಮಂಗಳವಾರ, ನವೆಂಬರ್ 30, 2010

ಬೆಳಕಿನ ಸಾಲ

ನಡುರಾತ್ರಿಯಲಿ ಪಡೆದ
ಚಂದ್ರನ ಬೆಳದಿಂಗಳ ಸಾಲವ
ತೀರಿಸುವುದಾದರು ಎಂತು?

ಕಡ

ಮನಸಿನ೦ಗಳದಲಿ ಸೂರ್ಯಾಸ್ತ
ಎತ್ತ ನೋಡಿದರೂ ಕಪ್ಪು ಕತ್ತಲು
ಓ ಚ೦ದ್ರಮನೇ,
ಗುರಿಸೇರಬೇಕು 
ಬೆಳದಿಂಗಳಿಷ್ಟು ಕಡ ಕೊಡುವೆಯಾ?

ಸೋಮವಾರ, ನವೆಂಬರ್ 29, 2010

ನನ್ನ ದೇಶ ಭಾರತ

ನನ್ನ ದೇಶ ಭಾರತ
ಇದು ನಮ್ಮ ದೇಶ ಭಾರತ

ಸ್ವ೦ತಿಕೆಯ ತ೦ತ್ರ ಬಳಸಿ
ಸ್ವತ೦ತ್ರವಾದ ಭಾರತ

ಕುತ೦ತ್ರ ಬರದ ಸ್ವತ೦ತ್ರ ಜನರ
ಪ್ರಚ೦ಡ ದೇಶ ಭಾರತ

ವಿವಿಧ ಭಾಷೆ ವೇಷವಿರುವ
ವಿಶಾಲ ದೇಶ ಭಾರತ

ಹಸಿರೆ ತನ್ನ ಉಸಿರು ಎನುವ
ಸಂವೃದ್ಧ  ದೇಶ ಭಾರತ
 
 ನನ್ನ ದೇಶ ಭಾರತ
ಇದು ಸ್ವತ೦ತ್ರ ದೇಶ ಭಾರತ