ಸೋಮವಾರ, ಡಿಸೆಂಬರ್ 13, 2010

ಯಂಗ್-ಏಜ್

ರಸ್ತೆಯಲ್ಲಿ ಕಣ್ಣು ಹೊಡೆದು
ಪಾರ್ಕಿನಲ್ಲಿ ಕೈಯ ಹಿಡಿದು
ಮುಗಿದೆಹೋಯ್ತು ಯಂಗ್-ಏಜ್
ಹುಡುಗಿಯ ಎ೦ಗೇಜ್-ಮೆಂಟು

ಶನಿವಾರ, ಡಿಸೆಂಬರ್ 4, 2010

ಮೌನಗಾನ

ಮಾತು ಬರುವ ಮೂಕನಾದೆ 
ಮಾತೇ ಇಲ್ಲದೆ ದಿನವ ಕಳೆದೆ 
ಎಲ್ಲಿ ಹೋದಿರೆಲ್ಲ  ನೀವು?

ಮೌನ ಮನವ ಚುಚ್ಚುತಿಹುದು
ನಗುವೂ ಬಾಡಿ ಹೋಗುತಿಹುದು
ಎಂದು ಬರುವಿರೆಲ್ಲ ನೀವು?


ಮಂಗಳವಾರ, ನವೆಂಬರ್ 30, 2010

ಬೆಳಕಿನ ಸಾಲ

ನಡುರಾತ್ರಿಯಲಿ ಪಡೆದ
ಚಂದ್ರನ ಬೆಳದಿಂಗಳ ಸಾಲವ
ತೀರಿಸುವುದಾದರು ಎಂತು?

ಕಡ

ಮನಸಿನ೦ಗಳದಲಿ ಸೂರ್ಯಾಸ್ತ
ಎತ್ತ ನೋಡಿದರೂ ಕಪ್ಪು ಕತ್ತಲು
ಓ ಚ೦ದ್ರಮನೇ,
ಗುರಿಸೇರಬೇಕು 
ಬೆಳದಿಂಗಳಿಷ್ಟು ಕಡ ಕೊಡುವೆಯಾ?

ಸೋಮವಾರ, ನವೆಂಬರ್ 29, 2010

ನನ್ನ ದೇಶ ಭಾರತ

ನನ್ನ ದೇಶ ಭಾರತ
ಇದು ನಮ್ಮ ದೇಶ ಭಾರತ

ಸ್ವ೦ತಿಕೆಯ ತ೦ತ್ರ ಬಳಸಿ
ಸ್ವತ೦ತ್ರವಾದ ಭಾರತ

ಕುತ೦ತ್ರ ಬರದ ಸ್ವತ೦ತ್ರ ಜನರ
ಪ್ರಚ೦ಡ ದೇಶ ಭಾರತ

ವಿವಿಧ ಭಾಷೆ ವೇಷವಿರುವ
ವಿಶಾಲ ದೇಶ ಭಾರತ

ಹಸಿರೆ ತನ್ನ ಉಸಿರು ಎನುವ
ಸಂವೃದ್ಧ  ದೇಶ ಭಾರತ
 
 ನನ್ನ ದೇಶ ಭಾರತ
ಇದು ಸ್ವತ೦ತ್ರ ದೇಶ ಭಾರತ

ಬುಧವಾರ, ಜುಲೈ 7, 2010

ಮ೦ದೇವ್ರು

ನಿನ್ಮನೆನಲ್ಲಿಲ್ಲಾ೦ದ್ಕೊ೦ಡು  ಗುಡಿಗ್ಯಾಕ್ಹೊಗ್ತೀ ಮ೦ಕೇ
ಹುಡ್ಕು ಮನ್ಸಲ್ನಿ೦ಕಾಣ್ಬೌದು ಒ೦ದೋ-ಎರಡೋ ದೇವ್ರು
ಇಲ್ಲಾ೦ತ೦ದ್ರೆ ಕತ್ತೆತ್ನೋಡು ಕಾಣ್ತಾರಪ್ಪ-ಅಮ್ಮ
ಬೇಕಾದಾಗ-ಕೂಗ್ಹಾಕ್ದಾಗ ಬರ್ತಾರಪ್ಪ- ಅಮ್ಮ
ದೇವ್ರಿಗಿ೦ತ ಇವ್ರೇ ವಾಸಿ ಬರ್ತಾರ್ಕರ್ದಾಗ್ಲೆಲ್ಲಾ
ಹೆಚ್ಚೇ ಇವ್ರು ಯಾಕ೦ತ೦ದ್ರೆ ಕೊಡ್ತಾರ್ಕೇಳಿದ್ನೆಲ್ಲಾ

ಮಂಗಳವಾರ, ಜೂನ್ 29, 2010

ಜಾತಿ

ಅರಿವರಿಲ್ಲ ಹೇಳ್ವರಿಲ್ಲ
ತಿಳಿಸುವವರು ಯಾರು ಇಲ್ಲ, 
ಎ೦ದು ಬ೦ತು ಎ೦ತು ಬಂತು 
ಜಾತಿ ನಮ್ಮ ನಡುವಲಿ?

ದಿಟ್ಟ ಮನದಿ ಜಾತಿ ದಾಟಿ 
ಜ್ಯೋತಿಯೊಂದ ಕಂಡರವರು,
ಜ್ಯೋತಿಯಿಂದ ಪ೦ಜು ಉರಿಸಿ 
ಮನೆಯನೇಕೆ ಸುಡುವರಿವರು? 

ಪ್ರಾಣಿ ಪಕ್ಷಿಗಳಿಗೆ ಇರದ 
ಜಾತಿ ಮನುಜಗೇತಕೆ?
ಜಾತಿ ಮೀರಿದಾತ ತಾನೇ 
ದಾತ ಸಕಲ ಪ್ರಾಣಿಗೂ?

ಭಾನುವಾರ, ಜನವರಿ 3, 2010

ಇದ್ಯಾವುದೂ ಅಲ್ಲ

ನಡುರಾತ್ರಿಯಲ್ಲ, ಪಟಾಕಿ ಹಚ್ಚುವುದೂ ಅಲ್ಲ
ಗೆಳೆಯರೊಡಗೂಡಿ ತಿಂದು ಕುಡಿಯುವುದಲ್ಲ
ಮನೆಯಲ್ಲಿ ಮಾಡಿದ ಸಿಹಿಯೂಟವೂ ಅಲ್ಲ

ಗುರಿಯೊಂದನು ಹುಡುಕಿ ಪಟ್ಟಿಗೆ ಸೇರಿಸುವುದಲ್ಲ
ಸಿಕ್ಕವರಿಗೆಲ್ಲ ಶುಭಾಶಯವ ಹೇಳುವುದಲ್ಲ
ತಾಣಗಳಿಗೆ ಹೋಗುವುದಲ್ಲ, ವಿಶ್ರಮಿಸುವುದಲ್ಲ

ಹೊಸವರುಷವೆಂದರೆ ಇದಾವುದೂ ಅಲ್ಲ
ಇದು ಬರಿಯ ರಜಾ ದಿನವಲ್ಲ