ಶುಕ್ರವಾರ, ಮೇ 15, 2009

ಬುಧವಾರ, ಏಪ್ರಿಲ್ 15, 2009

ಜೀವ(ನ)

ಬಾನೆತ್ತರದ ಕಟ್ಟಡದಿ ಮಿಸುಕಾಡದೆ ಕುಳಿತಿಹುದು
ಯಂತ್ರ, ಯಾಂತ್ರಿಕರ ನಡುವೆ ಜೀವ ಕಳೆಗುಂದಿಹುದು
ಮೌಲ್ಯವಿಲ್ಲದೆ ಗುರಿಯನರಸುತ ತಾ ಸುತ್ತಿ ಬಳಲಿಹುದು
ಕಾಂಚಾಣದ ನೆರಳಿನಲಿ ಜೀವಕಾಂತಿ ಮಸುಕಾಗಿಹುದು
ವಿದ್ಯುದ್ದೀಪದಡಿ ದುಡಿಯುತ ಕಾಲ ಕಳೆಯುತಿಹುದು
ತಾನ್ ರಾಜ ದರ್ಬಾರಿನ ಮೂಲೆಯ ಕಸವಾಗಿಹುದು

ಭಾನುವಾರ, ಫೆಬ್ರವರಿ 8, 2009

ಸ್ಫೂರ್ತಿ

ಯಾರು ದಿನವು ತರುವಳೋ ಎನ್ನ ಮನಕೆ ಹರುಷವ
ಯಾರು ದಿಟದಿ ಕೇಳ್ವಳೋ ಎನ್ನ ಮನದಾಕಾಂಕ್ಷೆಯಾ
ಯಾರು ಮೆಚ್ಚಿ ನಲಿವಳೋ ಎನ್ನ ಆಯ್ಕೆ ಬಯಕೆಯ
ಅವಳೇ ನನ್ನ ಜನನಿಯು ಜಗಕೆ ನನ್ನ ಕೊಟ್ಟಳು
ನನ್ನ ಸ್ಫೂರ್ತಿ ಚಿಲುಮೆಯು

ಭಾನುವಾರ, ಜನವರಿ 4, 2009

ಪ್ರೀತಿ ಹಳೆಯದಾ?

ನಿನ್ನೆ ಮಾಡಿದಾ ಅಡುಗೆ
ಇಂದು ಹಳೆಯದು
ನಿನ್ನೆ ನಡೆದಾ ದಾರಿ
ಇಂದು ಹಳೆಯದು
ನಿನ್ನೆ ಓದಿದಾ ಕವನ
ಇಂದು ಹಳೆಯದು
ನಿನ್ನೆ ಮಾಡಿದಾ ಪ್ರೀತಿ
ಇಂದು ಹಳೆಯದಾ?